Wednesday, September 8, 2021

*ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ "ಕೈಲ್ ಪೋಳ್ದ್ "

ಗೋಣಿಕೊಪ್ಪ
*ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ "ಕೈಲ್ ಪೋಳ್ದ್ "ಹಬ್ಬ ಅಚರಿಸಲಾಯಿತು* ಕೊವಿ, ಕತ್ತಿ, ನೇಗಿಲು ,ನೋಗ, ಇಟ್ಟು ಸಾಂಪ್ರದಾಯಿಕ ಪೂಜೆಯನ್ನು ಜನಾಂಗದ ಹಿರಿಯರಾದ ಮೂರಿರ ಕುಶಾಲಪ್ಪ, ಪಾರ್ವತಿ ದಂಪತಿಗಳು  ನೆರವೇರಿಸಿದರು, ದುಡಿಕೊಟ್ಟ್ ಪಾಟನ್ನು ಮಾಜಿ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ರಾದ ತೊರೇರ ಮುದ್ದಯ್ಯನವರೊಂದಿಗೆ ಸಮಾಜದ ನಿರ್ದೇಶಕರುಗಳಾದ ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟೀರ ಕುಟ್ಟಪ್ಪ, ತಂಬಂಡ ಮಂಜು, ನೆರವೇರಿಸಿದರು, ಹೆಗ್ಗಡೆ ಸಮಾಜದ ಅದ್ಯಕ್ಷರಾದ ಪಡಿಞರಂಡ ಅಯ್ಯಪ್ಪ ನವರು ಮಾತನಾಡಿ ಮಾತೆ ಕಾವೇರಿ, ಇಗ್ಗುತಪ್ಪ ಮತ್ತು ಜನಾಂಗದ 60 ವಕ್ಕಗಳ ಗುರು ಕಾರಣರು , ಹಾಗೂ ನಾಡಿನ ಎಲ್ಲಾ ದೇವಾನುದೇವತೆಗಳ ಅಶಿರ್ವಾದ ದೊಂದಿಗೆ ಜನಾಂಗ ಬಾಂದವರಲ್ಲಿ ಮತ್ತು ಕೊಡಗಿನಲ್ಲಿ ಶಾಂತಿ ಸಮೃದ್ಧಿ ಸದಾ ನೆಲೆಸಿ ವಿಶ್ವ ಕೊವಿಡ್ ಮುಕ್ತವಾಗಿ ಜನಜೀವನ ಸಹಜ ಸ್ಥಿತಿಯತ್ತ ಬಹು ಬೇಗ ಬರಲಿ ಎಂದು  ಪ್ರಾರ್ಥಿಸಿ ಕೈಲ್ ಪೋಳ್ದ್ ಹಬ್ಬದ ಅಯುಧ ಪೂಜೆಯಲ್ಲಿ ಜನಾಂಗ ಬಾಂದವರು ವಿಷೇಶವಾಗಿ ಕೋವಿಯನ್ನು ಪೂಜಿಸುವುದು ನಮ್ಮ ವೀರ ಪರಂಪರೆಯ ಸಕೇತವಾಗಿದ್ದು ಕೊವಿಯ ಮೇಲೆ ನಮಗಿರುವ ಹಕ್ಕುಗಳನ್ನು ಪ್ರತಿಬಿಂಬಿಸುತ್ತದೆ ಯೆಂದಯೆಂದು ಅಭಿಪ್ರಾಯ ಪಟ್ಟರು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪಡಿಞರಂಡ ಪ್ರಭುಕುಮಾರ್ ಮಾತನಾಡಿ ಸಮಾಜಗಳಲ್ಲಿ ಅಚರಿಸುವ ಕೈಲ್ ಪೋಳ್ದ್ ಹಬ್ಬ ನಮ್ಮ ಕೃಷಿ ಬದುಕಿನ  
ಮತ್ತು ವೀರ ಪರಂಪರೆಗಳನ್ನು ಯುವ ಪೀಳಿಗೆ ನೆನಪಿಸುವ ಹಬ್ಬವಾಗಿ ಪಾಳುಬಿಟ್ಟ  ಭತ್ತದ  ಗದ್ದೆಗಳಲ್ಲಿ ಮತ್ತೆ ಉಳುಮೆಮಾಡಲು ಪ್ರೇರಣೆನೀಡುವಂತಾಗಿದೆಯೆಂದರು ,ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಕೊಂಗೆಪಂಡ ರವಿ, ಪಂದಿಕಂಡ ಸುನ, ಮೂರಿರ ಶಾಂತಿ, ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ, ವಿಂಗ್ ಕಮಾಂಡರ್ ಚಂಗಚಂಡ ಪ್ರವೀಣ್ ಮತ್ತಿತರರು ಹಾಜರಿದ್ದರು

*ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ "ಕೈಲ್ ಪೋಳ್ದ್ "

ಗೋಣಿಕೊಪ್ಪ *ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ "ಕೈಲ್ ಪೋಳ್ದ್ "ಹಬ್ಬ ಅಚರಿಸಲಾಯಿತು* ಕೊವಿ, ಕತ್ತಿ, ನೇಗಿಲು...